ಜಗತ್ತೇ ನಿನ್ನ
ಬಗ್ಗೆ ತಾಳ್ಮೆ ಕಳೆದುಕೊಂಡು ದೂಷಿಸುತ್ತಿರುವಾಗ,
ನೀನು ನಿನ್ನ
ಬಗ್ಗೆ ಶಾಂತನಾಗಿರಬಲ್ಲೆಯಾದರೆ;
ಜಗತ್ತೇ ನಿನ್ನನ್ನು
ಅನುಮಾನಿಸುತ್ತಿರುವಾಗ,
ಅವರಿಗೆ ಅನುಮಾನಿಸಲು
ಬಿಟ್ಟು, ನೀನು ನಿನ್ನನ್ನು ನಂಬಬಲ್ಲೆಯಾದರೆ;
ನೀನು ಕಾಯುವ
ತಾಳ್ಮೆ ಹೊಂದಿದ್ದರೂ, ಕಾಯುತ್ತಾ ದಣಿಯದಿದ್ದರೆ;
ನಿನ್ನ ಬಗ್ಗೆ
ಬರಿ ಸುಳ್ಳುಗಳೇ ಹರಡಿದ್ದರೂ, ನೀನು ಇನ್ನೊಬ್ಬರ ಬಗ್ಗೆ ಸುಳ್ಳು ಹರಡುತ್ತಿಲ್ಲವಾದರೆ;
ನಿನ್ನ ಬಗ್ಗೆ
ದ್ವೇಷ ತುಂಬಿದ್ದರೂ, ನೀನು ಯಾರನ್ನೂ ದ್ವೇಷಿಸುವುದಿಲ್ಲವಾದರೆ;
ಇವೆಲ್ಲರ ನಂತರವೂ
ತುಂಬಾ ಒಳ್ಳೆಯವನ ಹಾಗೆ ಕಾಣದೆ,
ತುಂಬಾ ಜಾಣನ
ಹಾಗೆ ಮಾತನಾಡದೇ ಇರಬಲ್ಲೆಯಾದರೆ;
ನೀನು ಕನಸುಗಳನ್ನು
ಕಾಣಬಲ್ಲೆಯಾದರೆ,
ಮತ್ತು ಬರಿ
ಕನಸುಗಳಿಗೆ ನಿನ್ನನ್ನು ಆಳಲು ಬಿಡದಿದ್ದರೆ;
ನೀನು ಯೋಚಿಸಬಲ್ಲೆಯಾದರೆ,
ಮತ್ತು ಯೋಚಿಸುವುದೊಂದನ್ನೇ
ಗುರಿಯಾಸಿಕೊಳ್ಳದಿದ್ದರೆ;
ನೀನು ವಿಜಯ
ಮತ್ತು ವಿಪತ್ತುಗಳೆರಡನ್ನೂ ಕಂಡು,
ಅವೆರಡೂ ಮುಖಗಳನ್ನು
ಒಂದೇ ರೀತಿ ಸ್ವೀಕರಿಸಬಲ್ಲೆಯಾದರೆ;
ನೀ ಆಡಿದ ಸತ್ಯದ
ಮಾತೊಂದು ಗಿರಕಿ ಹೊಡೆದು, ವಂಚಕರಿಂದ ತಿರುಚಲ್ಪಟ್ಟು,
ಸುಳ್ಳೆಂದು
ನಿನ್ನ ಬಳಿ ಬಂದು ನಿಂತಾಗ ಅದನ್ನು ಎದುರಿಸಬಲ್ಲೆಯಾದರೆ;
ಬದುಕನ್ನೇ
ಮುಡುಪಿಟ್ಟು ಕಟ್ಟಿದ ಕನಸೊಂದು ಕಣ್ಮುಂದೆಯೇ ಮುರಿದು ಬೀಳುತ್ತಿರುವಾಗ,
ಬೀಳುವುದನ್ನು
ನೋಡುತ್ತಲೇ ಮುರಿದ ಕನಸುಳನ್ನೆಲ್ಲ
ಜೋಡಿಸಿ ಮತ್ತೆ
ಕಟ್ಟಲು ಅಣಿಯಾಗುತ್ತಿಯೆಂದಾದರೆ;
ನಿನ್ನ ಗೆಲುವುಗಳನ್ನೆಲ್ಲ
ರಾಶಿಮಾಡಿ, ಗುಡಿಸಿ, ಗಾಳಿಗೆ ತೂರಬಲ್ಲೆಯಾದರೆ;
ಕಳೆದುಕೊಂಡದ್ದರೆ
ಬಗ್ಗೆ ಉಸಿರೆತ್ತದೆ, ಮತ್ತೆ ಮೊದಲಿಂದ ಆರಂಭಿಸುವೆಯಾದರೆ;
ನಿನ್ನೊಳಗೆ ಉತ್ಸಾಹ ಸತ್ತಿದೆ ಅನಿಸಿದಾಗಲೂ, ಹೃದಯ, ನರ-ನಾಡಿಗಳನ್ನು
ಮತ್ತೆ ಸಿದ್ಧಗೊಳಿಸಿ
ಹೋರಾಡಲು ಅಣಿಯಾಗುತ್ತಿ ಎಂದಾದರೆ;
‘ಸೋಲಬೇಡ,
ನಿಲ್ಲು’ ಎನ್ನುವ ಆತ್ಮಚೈತನ್ಯ ಹೊರತುಪಡಿಸಿ
ನಿನ್ನಲ್ಲಿ
ಏನೂ ಇಲ್ಲದಿದ್ದಾಗಲೂ, ಗೆಲ್ಲಲು ಹೊರಡುವೆಯಾದರೆ;
ಜನಸಾಗರದ ಮಧ್ಯೆಯೂ
ನೀನು ನಿನ್ನತನ ಕಾಪಾಡಿಕೊಳ್ಳುವೆಯಾದರೆ;
ರಾಜರೊಂದಿಗೆ
ಬದುಕಿಯೂ, ಸಾಮಾನ್ಯರ ಸಂಬಂಧ ಕಡಿದುಕೊಳ್ಳುವುದಿಲ್ಲವಾದರೆ,
ಶತೃಗಳಾಗಲೀ,
ಮಿತ್ರರಾಗಲಿ ನಿನ್ನನ್ನು ನೋಯಿಸಲು ಸಾಧ್ಯವಿಲ್ಲವೆಂದಾದರೆ,
ನಿನಗೆ ಜಗತ್ತೇ
ಸಮಾನವಾಗಿ ಕಂಡು, ಅದರಲ್ಲಿ ಯಾರೂ ಹೆಚ್ಚು ಸಮಾನರಾಗದಿದ್ದರೆ,
ನಿರ್ದಯಿ ನಿಮಿಷವನ್ನು
ಅರವತ್ತು ಸಮಾನ ಸೆಕೆಂಡುಗಳಾಗಿ ಜೀವಿಸಬಲ್ಲೆಯಾದರೆ…
ನಿನ್ನದೇ ಈ
ಭುವನ ಮತ್ತು ಅದರಲ್ಲಿರುವ ಪ್ರತಿಯೊಂದೂ;
ಹೆಚ್ಚೇನು?
ನೀನೇ ಈ ಭುವನದ ಪ್ರೀತಿಯ ಮಗನು ನನ್ನ ಮಗುವೇ!
ಮೂಲ: ರುಡ್ಯಾರ್ಡ್ ಕಿಪ್ಲಿಂಗ್ ‘ಇಫ್’
ಕನ್ನಡಕ್ಕೆ: ಪರಶುರಾಮ ನಾಗೋಜಿ
Excellent translation. Do share widely.
ReplyDeleteSuper sir.. ❤🙏
ReplyDeleteSuper sir.. ❤🙏
ReplyDelete👌🙏
ReplyDeleteSuper sir 🙌
ReplyDelete❤️
ReplyDeleteSuper sir
ReplyDeleteಅದ್ಬುತವಾದ ಸಾಲುಗಳು ಸರ್❤️
ReplyDelete