ಗುರುದೇವ ರಬೀಂದ್ರರ ಜನ್ಮಜಯಂತಿ ನೆನಪಿಗೆ…


ಲ್ಲಿ ಮನ ಭಯದಿಂದ ಮುಕ್ತವಿದೆಯೊ, ಎಲ್ಲಿ ತಲೆ ಗೌರವದಿಂದ ಎತ್ತಿದೆಯೊ,
ಎಲ್ಲಿ ಜ್ಞಾನ ಉಚಿತವಿದೆಯೊ,
ಎಲ್ಲಿ ಮನುಷ್ಯ ಜಗತ್ತು ಅಲ್ಪತನದ ಗೋಡೆಗಳ ಕಟ್ಟಿಕೊಂಡು ಬದುಕುತ್ತಿಲ್ಲವೊ,
ಎಲ್ಲಿ ಮಾತುಗಳು ಸತ್ಯದ ಆಳದಿಂದ ಹೊರಬರುತ್ತವೆಯೊ,
ಎಲ್ಲಿ ದಣಿವರಿಯದ ಶ್ರಮವು ಸದಾ ಪರಿಪೂರ್ಣತೆಗೆ ತುಡಿಯುತ್ತದೆಯೊ,
ಎಲ್ಲಿ ವೈಚಾರಿಕ ಸ್ಪಷ್ಟತೆಯ ಝರಿಯು ಮಂಕು ಕವಿದ, ನಿರ್ಜೀವ ಮರುಭೂಮಿಯಲ್ಲಿ ತನ್ನ ದಾರಿಯನ್ನು ಕಳೆದುಕೊಂಡಿಲ್ಲವೊ,
ಎಲ್ಲಿ ಮನ ಉದಾತ್ತ ಚಿಂತನೆ ಮತ್ತು ಕಾರ್ಯದೆಡೆಗೆ ನಿನ್ನಿಂದ ಮುನ್ನಡೆಸಲ್ಪಡುತ್ತಿದೆಯೊ,
ತಂದೆಯೇ, ಅಂತಹ ಸ್ವಾತಂತ್ರ‍್ಯ ಸ್ವರ್ಗಕ್ಕೆ ಎಚ್ಚರಗೊಳ್ಳಲಿ ನನ್ನ ದೇಶ.

-ರವೀಂದ್ರನಾಥ ಟ್ಯಾಗೋರ್
(ಅನುವಾದ ಪ್ರಯತ್ನ: ಪರಶುರಾಮ ನಾಗೋಜಿ)
Original Poem: Chitto Jetha Bhaishunyo (Bangali)
Where The Mind Is Without Fear (English)

Comments

Post a Comment