“ಏನs ಹೇಳ್ರಿ, ಈಗಿನ ಹುಡುಗರೊಳಗ ಮೊದಲಿನ ಶಿಸ್ತು, ವಿಧೇಯತೆ ಉಳಿದಿಲ್ಲ ನೋಡ್ರಿ”
ಅನೇಕರು ಹೇಳುವ ಇಂಥ ಮಾತುಗಳನ್ನು ನಾನು ಕೇಳುತ್ತಲೇ ಬಂದಿದ್ದೇನೆ – ಅನುಮಾನದಿಂದ.
ಅನೇಕರು ಹೇಳುವ ಇಂಥ ಮಾತುಗಳನ್ನು ನಾನು ಕೇಳುತ್ತಲೇ ಬಂದಿದ್ದೇನೆ – ಅನುಮಾನದಿಂದ.
ಇದು ಪ್ರತಿಯೊಂದು ಪೀಳಿಗೆಯ ಗೋಳು. ತನ್ನ ಪೀಳಿಗೆಯೇ ತನ್ನ ಕಾಲವೇ ಅತ್ಯಂತ ಶ್ರೇಷ್ಠವಾದದ್ದು. ಮಾದರಿಯಾದದ್ದು: ಅನಂತರದ್ದು ಎಲ್ಲಾ ಅವನತಿಯದು, ಅಧಃಪತನದ್ದು ಎಂಬ ಸಾರಾ ಸಗಟಾದ ಸರ್ವಾನುಮತದ ಗೊತ್ತುವಳಿ ಆಯಾ ಪೀಳಿಗೆಯ ಅಸ್ತಿತ್ವದ ಅಗತ್ಯವೂ ಇರಬಹುದು.
ಹೌದು. ನಾವು ಕನ್ನಡ ಶಾಲೆಗೆ ಹೋಗುವ ದಿನಗಳಲ್ಲಿ ಮಾಸ್ತರರ ಬಗ್ಗೆ ಭಯವಿರುತ್ತಿತ್ತು. ಶಾಲೆಯಲ್ಲಿ ಹೊಡೆತ ತಿಂದರೂ ಮನೆಯಲ್ಲಿ ಹೇಳುತ್ತಿರಲಿಲ್ಲ. ಆದರೆ? ಶಾಲೆಯ ಸೆಳೆತ ಮಾತ್ರ ಕಮ್ಮಿ ಆಗುತ್ತಿರಲಿಲ್ಲ. ಈಗ ಮಾಸ್ತರು ಸ್ವಲ್ಪ ಕಣ್ಣು ಕಿಸಿದರೆ ಸಾಕು. ಮಧ್ಯಾಹ್ನದ ಹೊತ್ತಿಗೆ ವಿದ್ಯಾರ್ಥಿಯ ಅಪ್ಪನೋ, ಕಾಕಾನೋ, ಅಣ್ಣನೋ ಬಂದು ಮಾಸ್ತರನ್ನು ವಿಚಾರಿಸಿಕೊಳ್ಳುತ್ತಾರೆ.
ಇಷ್ಟಿದ್ದರೂ ಸಹಿತ ನಾನು ಬಲವಾಗಿ ನಂಬಿದ್ದೇನೆ. ನಾನು ಮಾಡಲಿರುವ ಪಾಠದ ಹೋಂವರ್ಕ್ ಸರಿಯಾಗಿ ಮಾಡಿದ್ದರೆ: ನನಗೆ ಲಭ್ಯವಿರುವ ಐವತ್ತೋ ಅರವತ್ತೋ ಮಿನಿಟುಗಳ ಅವಧಿಯಲ್ಲಿ ನನ್ನ ಎದುರಿಗೆ ಕ್ಲಾಸಿನಲ್ಲಿ ಕುಳಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪಾಠದಲ್ಲಿ ಒಳಗು ಮಾಡಿಕೊಳ್ಳುವ ಸಹಜ ಶೈಲಿ ನನ್ನದಾಗಿದ್ದರೆ: ಅವರ ಕಣ್ಣುಗಳಲ್ಲಿ ಪ್ರಶ್ನೆಗಳನ್ನು ಮೂಡಿಸುತ್ತಲೇ ಅವರಿಗೆ ತಾವೇ ಉತ್ತರ ಪಡೆದುಕೊಳ್ಳುವಂಥ ಅರಿವಿನ ಬೆಳಕಿಂಡಿಗಳನ್ನು ನಾನು ತೆರೆಯುತ್ತಿದ್ದರೆ – ಅವರು ಎಂದಿಗೂ ಅಶಿಸ್ತಿನ, ಅವಿಧೇಯ ವ್ಯಕ್ತಿಗಳಾಗಿ ಉಳಿಯಲು ಸಾಧ್ಯವಿಲ್ಲ. ಈ ಬಗೆಯ ಕಾಯಕನಿಷ್ಠೆ ಮತ್ತು ಜೀವನ ಪ್ರೀತಿ ನಮ್ಮಲ್ಲಿ ಇದೆಯೇ? ಎಂಬ ಪ್ರಶ್ನೆ ನಮಗೆ ನಾವೇ ಹಾಕಿಕೊಂಡು ಅನಂತರ ಆ-ಈ ಕಾಮೆಂಟಿಗೆ ಕೈ ಹಾಕಬಹುದು.
*****
(ಚಂಪಾ ಅವರ 'ನಿತ್ಯ ವರ್ತಮಾನ' ಪುಸ್ತಕದ
'ಗುರು – ಶಿಷ್ಯರು ಭಯ – ಭಕ್ತಿಗಳೂ' ಲೇಖನದ ಆಯ್ದ ಭಾಗ)
*****
(ಚಂಪಾ ಅವರ 'ನಿತ್ಯ ವರ್ತಮಾನ' ಪುಸ್ತಕದ
'ಗುರು – ಶಿಷ್ಯರು ಭಯ – ಭಕ್ತಿಗಳೂ' ಲೇಖನದ ಆಯ್ದ ಭಾಗ)
ನಿತ್ಯ ವರ್ತಮಾನ
ಪ್ರೊ. ಚಂದ್ರಶೇಖರ ಪಾಟೀಲ
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-2007
ಪ್ರೊ. ಚಂದ್ರಶೇಖರ ಪಾಟೀಲ
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-2007
ಶಿಕ್ಷಕರ ದಿನದ ಶುಭಾಶಯಗಳು
Comments
Post a Comment