ಇಂದು ಗುರು ಪೂರ್ಣಿಮ
ಆ ಕಾರಣಕ್ಕಾಗಿಯೆ ಇದನ್ನು ಹಂಚಿಕೊಳ್ಳಬೇಕಿದೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳು ತಮ್ಮ ಗುರುಗಳಾದ ಮುಕುಂದೂರು ಸ್ವಾಮಿಗಳ ನೆನಪುಗಳನ್ನು ಕುರಿತು ಬರೆದ 'ಯೇಗ್ದಾಗೆಲ್ಲಾ ಐತೆ' ಪುಸ್ತಕದ ಬೆನ್ನುಡಿಯಲ್ಲಿ ದಾಖಲಿಸಿರುವ ಈ ಮಾತುಗಳು ನನಗೆ ಹಲವು ಬಾರಿ ಕಾಡಿವೆ. ಅಹಂಕಾರ ಬಿಟ್ಟವರೇ ಗುರು ಅನ್ನೋದನ್ನು ತಮ್ಮ ಅನುಭಾವದ ಮೂಲಕ ಮುಕುಂದೂರು ಸ್ವಾಮಿಗಳು ಹೇಳಿದ್ದು ನಮ್ಮನ್ನು ಸದಾ ಎಚ್ಚರದಲ್ಲಿಟ್ಟಿರಬೇಕು.
ಅಂದಹಾಗೆ 'ಯೇಗ್ದಾಗೆಲ್ಲ ಐತೆ' ಪುಸ್ತಕ ಕನ್ನಡದ ಅದ್ಭುತ ಅಷ್ಟೇ ಸರಳ ತತ್ವಶಾಸ್ತ್ರದ ಪುಸ್ತಕ. ಖಂಡಿತ ಓದಲೇಬೇಕಿರುವ ನಮ್ಮ ಮನೆಯ ಲೈಬ್ರರಿಯಲ್ಲಿ ಇರಲೇಬೇಕಿರುವ ಪುಸ್ತಕಗಳಲ್ಲಿ ಒಂದು.
ಕಾಮಧೇನು ಪುಸ್ತಕ ಭವನ ಪ್ರಕಾಶಿಸಿರುವ ಈ ಪುಸ್ತಕ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.
ಗರಾ ಬಿಟ್ರೆನೆ ಗುರು ನೋಡಪ್ಪ.. 👌🙏
ReplyDelete